ಬಿಗ್ ಬ್ರೇಕಿಂಗ್: ಮೋದಿಯವರ ಅರ್ಥಿಕ ಸುಧಾರಣೆಗೆ I.M.F ನಿಂದ ಪುಲ್ ಕ್ರೇಡಿಟ್...!!!I.M.F ಭಾರತದ ಪ್ರಗತಿಯ ಕುರ್ರಿತು ಹೇಳಿದ್ದೆನು ಗೊತ್ತಾ..??
ಪ್ರಧಾನಿ ನರೇಂದ್ರ ಮೋದಿ ಕೈಗೊಂಡಿರುವ ಮಹತ್ತರ ಆರ್ಥಿಕ ಸುಧಾರಣಾ ಕ್ರಮ ಮತ್ತು ಯೋಜನೆಗಳನ್ನು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯಾಗಿರುವ ಐಎಂಎಫ್ ಪ್ರಶಂಸಿದೆ. ಈ ವರ್ಷ ಮತ್ತು ಮುಂದಿನ ವರ್ಷದ ಮಟ್ಟಿಗೆ ಭಾರತವನ್ನು ವಿಶ್ವದ ಅತ್ಯಂತ ವೇಗದ ಆರ್ಥಿಕ ಪ್ರಗತಿ ಕಾಣುತ್ತಿರುವ ದೇಶವನ್ನಾಗಿ ಮಾಡಿರುವುದಕ್ಕೆ ಪಿಎಂ ನರೇಂದ್ರ ಮೋದಿಯವರಿಗೆ ಪೂರ್ತಿ ಕ್ರೆಡಿಟ್ ನೀಡಿದೆ.
ಬಾಲಿಯಲ್ಲಿ ನಡೆಯಲಿರುವ ಐಎಂಎಫ್ ವಾರ್ಷಿಕ ಸಭೆಗೆ ಮುನ್ನವೇ ಬಿಡುಗಡೆ ಮಾಡಲಾಗಿರುವ ವಿಶ್ವದ ಆರ್ಥಿಕ ಹೊರನೋಟ (ಡಬ್ಲ್ಯುಇಓ) ವರದಿಯಲ್ಲಿ "ಭಾರತದಲ್ಲಿ ಅತ್ಯಂತ ಮಹತ್ವದ ಮತ್ತು ಪ್ರಮುಖ ಆರ್ಥಿಕ ಸುಧಾರಣಾ ಉಪಕ್ರಮಗಳನ್ನು" (ಜಿಎಸ್‌ಟಿ ಸೇರಿದಂತೆ) ಅನುಷ್ಠಾನಿಸಲಾಗಿದೆ; ಹಣದುಬ್ಬರವನ್ನು ಹತೋಟಿಯಲ್ಲಿರಿಸುವ ಪರಿಣಾಮಕಾರಿ ಉಪಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ದೀವಾಳಿ ಸಂಹಿತೆಯನ್ನು ಜಾರಿಗೆ ತರಲಾಗಿದೆ ಮತ್ತು ವಿದೇಶಿ ಹೂಡಿಕೆಯನ್ನು ಉದಾರೀಕರಿಸುವ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಮತ್ತು ಆ ಮೂಲಕ ಸುಲಭದಲ್ಲಿ ಭಾರತದಲ್ಲಿ ಉದ್ಯಮ ಕೈಗೊಳ್ಳುವುದಕ್ಕೆ ಅವಕಾಶ ಕಲ್ಪಿಸಲಾಗಿದೆ' ಎಂದು ಐಎಂಎಫ್ ತಿಳಿಸಿದೆ.
ಪ್ರಸ್ತುತ ದಿನಗಳಲ್ಲಿ ಏರುತ್ತಿರುವ ತೈಲ ಬೆಲೆ ಮತ್ತು ಬಿಗಿ ಗೊಳ್ಳುತ್ತಿರುವ ಜಾಗತಿಕ ಹಣಕಾಸು ಸ್ಥಿತಿಗತಿಗಳಿಂದಾಗಿ ಈ ವರ್ಷ ಜುಲೈಯಲ್ಲಿ ಮಾಡಲಾಗಿದ್ದ ಮುಂದಿನ ವರ್ಷದ ಶೇ.7.4ರ ಅಂದಾಜು ಆರ್ಥಿಕ ಪ್ರಗತಿಯನ್ನು (ಜಿಡಿಪಿಯನ್ನು) ಶೇ.0.1ರಷ್ಟು ಇಳಿಸಬೇಕಾಗಿದೆ; ಹಾಗಿದ್ದರೂ ಭಾರತ ವಿಶ್ವದ ಅತ್ಯಂತ ವೇಗದ ಆರ್ಥಿಕ ಪ್ರಗತಿ ಕಾಣುತ್ತಿರುವ ದೇಶವಾಗಿ ಮುಂದುವರಿದಿದೆ ಮತ್ತು ವಿಶ್ವದ ಪ್ರಮುಖ ಆರ್ಥಿಕ ರಾಷ್ಟ್ರಗಳ ಸಾಲಿನಲ್ಲಿ ಅದು ನಿಲ್ಲುವಂತಾಗಿದೆ' ಎಂದು ಐಎಂಎಫ್ ವರದಿ ಹೇಳಿದೆ.


Comments
Post a Comment