ಭಾರತೀಯ ಜನತಾ ಪಾರ್ಟಿ ಪಕ್ಷವನ್ನು ಕಟ್ಟಿ ಬೆಳೆಸಿದ ಕೀರ್ತಿಯಲ್ಲಿ ಬಿ.ಜೆ.ಪಿಯ ಬೀಷ್ಮ ಎಂದು ಕರೆಸಿಕೊಳ್ಳುವ ಎಲ್.ಕೆ.ಅಡ್ವಾಣಿಯವರಿಗೆ ಸಮಾನವಾದ ಸ್ಥಾನಮಾನವಿದೆ. ಎಲ್.ಕೆ.ಅಡ್ವಾಣಿಯವರಿಗೆ 90 ವರ್ಷ ವಯಸ್ಸಾದರೂ ಅಡ್ವಾಣಿ ಅವರಿಗೆ ರಾಜಕೀಯ ನಿವೃತ್ತಿ ಆಗುವ ಮನಸ್ಸಿಲ್ಲ. ಇತ್ತೀಚೆಗೆ ಗುಜರಾತ್‌ನ ಮೋದಿ ಮತ್ತು ಅಮಿತ್ ಶಾ ಅವರಿಗೆ ಹತ್ತಿರದ ನಾಯಕರೊಬ್ಬರನ್ನು ಮನೆಗೆ ಕರೆಸಿಕೊಂಡಿದ್ದ ಅಡ್ವಾಣಿ ತನಗೆ ಇನ್ನೊಮ್ಮೆ ಗಾಂಧಿ ನಗರದಿಂದ ಸ್ಪರ್ಧಿಸುವ ಇಚ್ಛೆಯಿದೆ ಎಂದು ಹೇಳಿಕೊಂಡಿದ್ದಾರೆ.
ಈ ಮೂಲಕ ಮತ್ತೋಮ್ಮೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಮನಸ್ಸು ಅಡ್ವಾಣಿಯಾವರದ್ದು. ಈ ಮಾತನ್ನು ಮೋದಿ ಮತ್ತು ಶಾ ನೆರವೇರಿಸುತ್ತಾರ ಎಂಬುದು ಕುತೂಹಲ. 2019ರಲ್ಲಿ ಯಾರಿಗೂ ಬಹುಮತ ಸಿಗದೆ ಇದ್ದರೆ ಒಂದು ಅವಕಾಶ ಪವಾಡ ರೂಪದಲ್ಲಿ ಸಿಕ್ಕರೂ ಸಿಗಬಹುದು ಎಂಬ ಯೋಚನೆ ಇರಬಹುದೇನೋ.


Comments
Post a Comment