ರಾಜ್ಯದಲ್ಲಿ ಉಪಚುನಾವಣೆಯ ರಂಗು ಜೋರಾಗ ತೊಡಗಿದೆ. ಮೂರು ಲೋಕಸಭಾ ಕ್ಷೇತ್ರ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ಉಪಚುನಾವಣೆಯಲ್ಲೂ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳ ಮೈತ್ರಿ ಮುಂದುವರಿದಿದೆ. ಜೆಡಿಎಸ್ ಮಂಡ್ಯ ಲೋಕಸಭಾ ಕ್ಷೇತ್ರ ಮತ್ತು ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ಸ್ಪರ್ಧಿಸಿ ಉಳಿದೆ ಕ್ಷೇತ್ರಗಳನ್ನು ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟುಕೊಡುವ ತೀರ್ಮಾನ ಮಾಡಲಾಗಿದೆ.
ಐದು ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯುತ್ತಿದ್ದರು ರಾಜ್ಯದಲ್ಲಿ ಗಮನ ಸೆಳೆದಿರುವುದು ಗಣಿ ಜಿಲ್ಲೆ ಬಳ್ಳಾರಿ ಮಾತ್ರ. ಒಂದು ಕಾಲದಲ್ಲಿ ರಾಷ್ಟ್ರದ ಮಟ್ಟದಲ್ಲಿ ಸುದ್ದಿಯಾಗಿದ್ದ ಈ ಕ್ಷೇತ್ರ ಇಂದು ಕರ್ನಾಟಕ ರಾಜ್ಯದ ಪ್ರಭಾವಿ ನಾಯಕರ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಕೆ.ಶಿ ಹಾಗೂ ಬಳ್ಳಾರಿಯ ಪ್ರಭಾವಿ ನಾಯಕ ಶ್ರೀರಾಮುಲು ರವರ ಗುಂಪುಗಳ ನೇರ ಹಣಾಹಣಿ ಏರ್ಪಟ್ಟಿದೆ.
ಶ್ರೀ ರಾಮುಲು ರವರ ರಾಜೀನಾಮೆಯ ನಂತರ ತೆರವಾದ ಸ್ಥಾನಕ್ಕೆ ಶ್ರೀ ರಾಮುಲು ರವರ ಸಹೋದರಿ ಜೆ. ಶಾಂತ ಈಗಾಗಲೇ ಅಭ್ಯರ್ಥಿ ಎಂದು ಬಿಜೆಪಿಯಿಂದ ಘೋಷಣೆ ಮಾಡಲಾಗಿದೆ. ಮಾತ್ರವಲ್ಲದೆ ಬಳ್ಳಾರಿಯ ಬಿ.ಜೆ.ಪಿಯ ಉಸ್ತುವಾರಿಯನ್ನು ಶ್ರೀ ರಾಮುಲು ಅವರಿಗೆ ನೀಡಲಾಗಿದೆ.
ಶ್ರೀ ರಾಮುಲು V/S ಡಿ.ಕೆ.ಶಿ ನಡುವೆ "ಮಿನಿ ಲೋಕ" ಸಮರ:
ಶ್ರೀ ರಾಮುಲು ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ರಾಮುಲು ತಮ್ಮ ನಾಯಕತ್ವವನ್ನು ಸಾಬೀತುಮಾಡುವ ಅನಿವಾರ್ಯತೆ ಎದುರಾಗಿದೆ. ವಾಲ್ಮೀಕಿ ಸಮುದಾಯದ ಪ್ರಭಾವಿ ನಾಯಕನಾಗಿರುವ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದದ್ಯಾಂತ ಪ್ರವಾಸ ನಡೆಸಿದ್ದರು. ಪರಿಣಾಮ ಎಸ್.ಟಿ ಮೀಸಲು ಕ್ಷೇತ್ರಗಳಲ್ಲಿ ಬಿಜೆಪಿ ಹೆಚ್ಚಿವ ಸ್ಥಾನಗಳಿಸಲು ಸಾಧ್ಯವಾಗಿತ್ತು. ಬಳ್ಳಾರಿಯಲ್ಲಿ ಕಾಂಗ್ರೆಸ್ ಕೋಟೆ ಕೆಡವಲು ಬಿಜೆಪಿ ಕೂಡಾ ತನ್ನದೆಯಾದ ಕಾರ್ಯತಂತ್ರ ರೂಪಿಸಿದೆ. ಕ್ಷೇತ್ರವನ್ನು ಉಳಿಸಿಕೊಳ್ಳುವುದರ ಜೊತೆಗೆ ತಮ್ಮ ಸಹೋದರಿಯನ್ನು ಗೆಲ್ಲಿಸಿಕೊಡುವ ಹೊಣೆಗಾರಿಕೆ ಅವರ ಮೇಲಿದೆ. ಇದು ರಾಜ್ಯಮಟ್ಟದಲ್ಲಿ ಬಹಳ ಚರ್ಚೆಯಾಗುತ್ತಿದೆ. ಇದನ್ನು ಶ್ರೀ ರಾಮುಲು V/S ಡಿ.ಕೆ.ಶಿ ನಡುವೆ "ಮಿನಿ ಲೋಕ" ಸಮರ ಎಂದು ಬಣ್ಣಿಸಲಾಗುತ್ತಿದೆ. ಗೆಲುವು ಯಾರಿಗೆ ಎಂಬುದು ಸಾಧ್ಯದಲ್ಲೆ ತಿಳಿಯಲಿದೆ.



Comments
Post a Comment