ದೇಶದಲ್ಲಿ ಚುನಾವಣೆಯಾ ಕಾವು ಹೆಚ್ಚಾಗುತ್ತಿದೆ. ೨೦೧೯ರ ಲೋಕಸಭಾ ಚುನಾವಣೆಗೆ ಇನ್ನು ಕೆಲವು ತಿಂಗಳುಗಳು ಮಾತ್ರ ಬಾಕಿ ಉಳಿದಿದೆ. ಅದರೆ ಅದಕ್ಕೆ ಪೂರ್ವಭಾವಿಯಾಗಿ ಮೂರು ರಾಜ್ಯಗಳ ವಿಧಾನಸಭಾ ಚುನಾವಣೆಗಳು ಈ ವರ್ಷದ ಅಂತ್ಯದಲ್ಲಿ ನಡೆಯಲಿವೆ. ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿ.ಜೆ.ಪಿ ನೇತೃತ್ವದ ಎನ್.ಡಿ.ಎ ಗೆ ಈ ಮೂರು ವಿಧಾನಸಭಾ ಚುನಾವಣೆಗಳು ಪ್ರಮುಖ ದಿಕ್ಸೂಚಿಯಾಗಲಿದೆ. ಅದಕ್ಕಾಗಿ ಭರ್ಜರಿ ತಯಾರಿಗಳನ್ನು ನಡೆಸುತ್ತಿವೆ. ದೇಶದ ಆನೇಕ ಖಾಸಗಿ ಸಂಸ್ಥೆಗಳು ಸಮೀಕ್ಷೆಗಳ ಮೇಲೆ ಸಮೀಕ್ಷೆ ನಡೆಸುತ್ತಿವೆ.
ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್ ಗಢ ರಾಜ್ಯಗಳ ವಿಧಾನಸಭಾ ಚುನಾವಣೆಗಳ ಈ ಹಿಂದಿನ ಚುನಾವಣಾ ಪೂರ್ವ ಸಮೀಕ್ಷಾ ವರದಿಗಳ ಪ್ರಕಾರ ಬಿ.ಜೆ.ಪಿ ತನ್ನ ಮೂರು ಆಡಳಿತಾರೂಡ ರಾಜ್ಯಗಳ ಪೈಕಿ ಒಂದನ್ನು ಕಳೆದುಕೊಳ್ಳಲಿದೆ ಎಂಬ ವರದಿ ನೀಡಲಾಗಿತ್ತು ಅದರೆ ಹಿಂದಿ ಭಾಷಿಕ ರಾಜ್ಯಗಳ ವಿಧಾನಸಭಾ ಚುನಾವಣಾ ಪೂರ್ವ ಸಮೀಕ್ಷೆಯನ್ನು ಟೈಮ್ಸ್ ನೌ ಸಂಸ್ಥೆ ನಡೆಸಿದ್ದು ಇದರ ವರದಿ ಈ ರೀತಿ ಇದೆ.
ಮೋದಿ ಅಲೆಗೆ ಮೂರು ರಾಜ್ಯಗಳಲ್ಲಿ ಕಮಲಕ್ಕೆ ಮತ್ತೆ ನೆಲೆ:
೨೦೧೪ರ ನಂತರ ದೇಶದಲ್ಲಿ ದಟ್ಟವಾಗಿ ಗೋಚರಿಸುತ್ತಿರುವುದು ಮೋದಿ ಅಲೆ. ೨೦೧೯ರಲ್ಲೂ ಇದೇ ಅಲೆ ಕೆಲಸ ಮಾಡಲಿದೆ ಎಂಬುದು ರಾಜಕೀಯ ಪಂಡಿತರ ಲೆಕ್ಕಾಚಾರ. ಮಾತ್ರವಲ್ಲದೆ ಅದಕ್ಕೂ ಮೊದಲು ನಡೆಯುವ ವಿಧಾನಸಭಾ ಚುನಾವಣೆಗಳಲ್ಲಿ ಮೋದಿ ಅಲೆ ಕೆಲಸ್ ಮಾಡಲಿದೆ ಎಂದು ಸಮೀಕ್ಷಾ ವರದಿಯಲ್ಲಿ ತಿಳಿದು ಬರುತ್ತಿದೆ. ಮೋದಿಯವರ ಅಲೆಯಿಂದಾಗಿ ಮತ್ತೆ ಮೂರು ರಾಜ್ಯಗಳಲ್ಲಿ ಭಾರತೀಯ ಜನತಾ ಪಾರ್ಟಿ ಅಧಿಕಾರ ನಡೆಸಲಿದೆ ಎಂದು ವರದಿ ತಿಳಿಸಿದೆ.


Comments
Post a Comment