ಬಿಗ್ ಬ್ರೇಕಿಂಗ್ ನ್ಯೂಸ್: ಮೋದಿ ಸುನಾಮಿಗೆ ಕೊಚ್ಚಿ ಹೋಗುತ್ತಾ ವಿಪಕ್ಷಗಳು...!!!ಮೋದಿ ಆಲೆಯನ್ನು ತಡೆಯುವ ಪಕ್ಷವೇ ಇಲ್ಲ..??
ಹೌದು, ಮೋದಿ ವಿಶ್ವದ ಕಂಡ ಶ್ರೇಷ್ಠ ನಾಯಕ, ಭಾರತೀಯರ ಕಣ್ಮನಿ. ಭಾರತದ ಯಾವುದೇ ವ್ಯಕ್ತಿಗೆ ದೊರೆಯದ ಗೌರವ ಮೋದಿಯವರಿಗೆ ವಿಶ್ವದೆಲ್ಲೆಡೆಯಿಂದ ದೊರೆತಿದೆ. 2014ಲೋಕಸಭಾ ಚುನಾವಣೆಯಲ್ಲಿ ಮೋದಿ ಆಲೆ ಎಂದು ಬಿಂಬಿತವಾಗಿದ್ದ ಮೋದಿ ಜನಪ್ರಿಯತೆ ನಂತರದ ದಿನಗಳಲ್ಲಿ ಅದು ಭಾರತದಲ್ಲಿ ಮಾತ್ರವಲ್ಲದೆ ವಿದೇಶದಲ್ಲಿಯೂ ಮೋದಿ ವರ್ಚಸ್ಸು ಎಂದು ಬಿಂಬಿತವಾಯಿತು.
ಭಾರತದ ಅದೆಷ್ಟೊ ಜನರ ಕನಸು ಒಂದೇ ಭಾರತ "ವಿಶ್ವ ಗುರು" ವಾಗಿ ಬೆಳೆಯಬೇಕು. ಭಾರತ ಶಕ್ತಿಶಾಲಿ ಹಾಗೂ ಅಭಿವೃದ್ದಿ ಹೊಂದಿದ ರಾಷ್ಟ್ರವಾಗಿ ಗುರುತಿಸಿಕೊಳ್ಳಬೇಕೆಂಬುದು. ಸದ್ಯದ ಪರಿಸ್ಥಿಯಲ್ಲಿ ಭಾರತೀಯರ ಕಸಸು ನನಸಾಗುವ ಸಮಯ ಸನಿಹವಾಗುತ್ತಿದೆ. ಹನಿ ಹನಿಗಳು ಸೇರಿ ಸಮುದ್ರವಾಗುವಂತೆ ಒಂದೊಂದೆ ಮೆಟ್ಟಿಲುಗಳ ಮೂಲಕ ಭಾರತ ಶಿಖರದೆತ್ತಾರಕ್ಕೆ ಏರುತ್ತಿದೆ.
ಭಾರತದ ಈ ಎಲ್ಲಾ ಪ್ರಗತಿಗೆ ಕಾರಣ ೨೦೧೪ರ ನಂತರ ದೇಶದ ರಾಜಕೀಯ ಇತಿಹಾಸದಲ್ಲಿ ಹೊಸ ಕ್ರಾಂತಿ ಮೂಡಿಸಿದ ಪ್ರಧಾನಿ ಮೋದಿ. ಮೋದಿಯವರ ಸತತ ಪರಿಶ್ರಮದಿಂದ ಭಾರತ ಮುನ್ನುಗ್ಗುತ್ತಿದೆ. ದೇಶದ ಜನತೆ ಮೋದಿಯವರ ಆಡಳಿತಕ್ಕೆ ಪಿಧಾ ಆಗಿದ್ದಾರೆ. ಇಂತಹ ಸಂಧರ್ಭದಲ್ಲಿ ೨೦೧೯ರ ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಭಾರತೀಯ ಜನತಾ ಪಕ್ಷ ಮೋದಿಯಂತಹ ಪ್ರಭಾವಿ ನಾಯಕನ ಮುಖಾಂತರ ಚುನಾವಣೆಗೆ ಸಜ್ಜಾಗಿದೆ. ವಿಪಕ್ಷಗಳು ಮೋದಿಯವರಿಗೆ ಪರ್ಯಾಯ ನಾಯಕನನ್ನು ಆಯ್ಕೆ ಮಾಡಲು ಕಷ್ಟಪಡುತ್ತಿದೆ.
ದೇಶದೆಲ್ಲೆಡೆ "ಮೋದಿ ಮತ್ತೊಮ್ಮೆ" ಎಂಬ ಘೋಷ ವಾಕ್ಯ ಮೊಳಗುತ್ತಿದೆ. ಇಂತಹ ಸಂಧರ್ಭದಲ್ಲಿ ಮೋದಿ ಸುನಾಮಿಗೆ ಮತ್ತೊಮ್ಮೆ ವಿಪಕ್ಷಗಳು ಕೊಚ್ಚಿ ಹೋಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಮೋದಿ ಆಲೆಯನ್ನು ತಡೆಯಲು ವಿಪಕ್ಷಗಳಿಗೆ ಸರಿಯಾದ ಆಸ್ತ್ರವೇ ಇನ್ನು ದೊರೆತಿಲ್ಲ. ಇಂತಹ ಸಂಧರ್ಭದಲ್ಲಿ ದೇಶದ ಜನರ ನಾಡಿ ಮೀಡಿತವನ್ನು ತಿಳಿಯಲು ಹಲವಾರು ಸಂಸ್ಥೆಗಳು ಚುನಾವಣಾಪೂರ್ವ ಸಮೀಕ್ಷೆಯನ್ನು ಕೈಗೊಂಡಿದ್ದು ಅದರ ವರದಿ ಇಲ್ಲಿದೆ ನೋಡಿ.
ಸಿ-ವೋಟರ್, ರಿಪಬ್ಲಿಕ್ ಟಿವಿ ಜಂಟಿಯಾಗಿ ಚುನಾವಣಾ ಪೂರ್ವ ಸಮೀಕ್ಷೆಯನ್ನು ನಡೆಸಿದೆ ಅದರ ಪ್ರಕಾರ 543 ಲೋಕಸಭಾ ಸ್ಥಾನಗಳ ಪೈಕಿ ಬಿಜೆಪಿ ನೇತೃತ್ವದ ನ್ಯಾಷನಲ್ ಡೆಮೊಕ್ರಾಟಿಕ್ ಅಲೈಯನ್ಸ್ (ಎನ್ ಡಿಎ)ಗೆ 276 ಸ್ಥಾನಗಳನ್ನು ಗೆಲ್ಲಲಿದೆ, ಯುಪಿಎಗೆ 112 ಮತ್ತು ಇತರರಿಗೆ 155 ಸ್ಥಾನಗಳು ಸಿಗಲಿವೆ. ಈ ಸಮೀಕ್ಷಾ ವರದಿಯ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರವು ಮತ್ತೊಮ್ಮೆ ಕೇಂದ್ರದಲ್ಲಿ ಅಧಿಕಾರ ಸ್ಥಾಪಿಸಲಿದೆ.
ಸಿ-ವೋಟರ್, ರಿಪಬ್ಲಿಕ್ ಟಿವಿ ಜಂಟಿಯಾಗಿ ನಡೆಸಿರುವ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ರಾಜ್ಯವಾರು ಸೀಟು ಹಂಚಿಕೆಯ ವರದಿಯನ್ನು ನೀಡಿದ್ದು ಅದರ ಮಾಹಿತಿ ಇಲ್ಲಿದೆ ನೋಡಿ.
- ದೆಹಲಿ ಒಟ್ಟು ಸ್ಥಾನ 07: ಎನ್ ಡಿಎ: 07 ಯುಪಿಎ: 00 ಎಎಪಿ: 00
- ಹರ್ಯಾಣ ಒಟ್ಟು 10: ಎನ್ ಡಿಎ: 06 ಯುಪಿಎ: 03 ಇತರೆ: 01
- ಪಂಜಾಬ್ ಒಟ್ಟು13: ಎನ್ ಡಿಎ: 01 ಯುಪಿಎ: 12
- ಒಡಿಶಾ: ಒಟ್ಟು 21: ಬಿಜೆಪಿ: 13 ಬಿಜು ಜನತಾ ದಳ: 6 ಯುಪಿಎ : 2
- ಮಹಾರಾಷ್ಟ್ರ ಒಟ್ಟು48 : ಬಿಜೆಪಿ: 22 ಶಿವಸೇನಾ: 07 ಕಾಂಗ್ರೆಸ್: 11 ಎನ್ ಸಿಪಿ: 08
- ಛತ್ತೀಸ್ ಗಢ ಒಟ್ಟು 11: ಎನ್ ಡಿಎ: 09 ಯುಪಿಎ: 02
- ರಾಜಸ್ಥಾನ ಒಟ್ಟು 25: ಎನ್ ಡಿಎ: 18 ಯುಪಿಎ: 07
- ಮಧ್ಯಪ್ರದೇಶ ಒಟ್ಟು29 : ಎನ್ ಡಿಎ: 23 ಯುಪಿಎ: 06
- ಬಿಹಾರ ಒಟ್ಟು40: ಎನ್ ಡಿಎ: 31 ಯುಪಿಎ: 09
- ಉತ್ತರಪ್ರದೇಶ ಒಟ್ಟು80 : ಎನ್ ಡಿಎ: 36 ಯುಪಿಎ: 02 ಮಹಾಘಟಬಂದನ್ : 42
- ಉತ್ತರಖಂಡ್ ಒಟ್ಟು 05:ಎನ್ ಡಿಎ: 05 ಯುಪಿಎ 00
- ತೆಲಂಗಾಣ ಒಟ್ಟು 17: ಎನ್ ಡಿಎ: 01 ಯುಪಿಎ: 06 ಟಿಆರ್ ಎಸ್:09 ಎಐಎಮ್ ಐಎಮ್:01
- ತ್ರಿಪುರ ಒಟ್ಟು 02: ಎನ್ ಡಿಎ:02 ಯುಪಿಎ: 00
- ನಾಗಾಲ್ಯಾಡ್ ಒಟ್ಟು 01: ಎನ್ ಡಿಎ: 01 ಯುಪಿಎ: 00
- ತಮಿಳುನಾಡು ಒಟ್ಟು 39: ಎನ್ ಡಿಎ: 02 ಯುಪಿಎ:00 ಡಿಎಂಕೆ:28 ಎಐಎಡಿಎಂಕೆ: 09
- ಮೆಘಾಲಯ ಒಟ್ಟು 02: ಎನ್ ಡಿಎ: 01 ಯುಪಿಎ: 01
- ಲಕ್ಷದ್ವೀಪ ಒಟ್ಟು 01: ಎನ್ ಡಿಎ00 ಯುಪಿಎ: 01
- ಕೇರಳ ಒಟ್ಟು 20: ಎನ್ ಡಿಎ: 00 ಯುಪಿಎ: 16 ಎಲ್ ಡಿಎಫ್ 04
- ಕರ್ನಾಟಕ ಒಟ್ಟು 28: ಎನ್ ಡಿಎ18 ಯುಪಿಎ 07 ಜೆಡಿಎಸ್ 03
- ಜಾರ್ಖಂಡ್ ಒಟ್ಟು14: ಎನ್ ಡಿಎ: 08 ಯುಪಿಎ 05 ಜೆವಿಎಮ್ 01
- ಜಮ್ಮು ಮತ್ತು ಕಾಶ್ಮೀರ ಒಟ್ಟು 06: ಎನ್ ಡಿಎ : 02 ಯುಪಿಎ: 04
- ಹಿಮಾಚಲಪ್ರದೇಶ ಒಟ್ಟು 04:ಎನ್ ಡಿಎ: 04 ಯುಪಿಎ: 00
- ಗೋವಾ ಒಟ್ಟು 02: ಎನ್ ಡಿಎ: 01 ಯುಪಿಎ 01
- ಗುಜರಾತ್ ಒಟ್ಟು 26: ಎನ್ ಡಿಎ:24 ಯುಪಿಎ 02
- ಪುದುಚೆರಿ ಒಟ್ಟು o1: ಎನ್ ಡಿಎ00 ಯುಪಿಎ 01
- ಪಶ್ಚಿಮಬಂಗಾಳ ಒಟ್ಟು 42: ಎನ್ ಡಿಎ: 16 ಯುಪಿಎ 01 ಟಿಎಂಸಿ 25
By: Yash
Source: AsiaNet





Comments
Post a Comment