ಬಿಗ್ ಬ್ರೇಕಿಂಗ್: ಮಧ್ಯಪ್ರದೇಶ ಹಾಗೂ ಛತ್ತೀಸ್‌ಗಢ ರಾಜ್ಯಗಳಲ್ಲಿ "ಮತ್ತೋಮ್ಮೆ ಬಿ.ಜೆ.ಪಿ"..!!ಕಾಂಗ್ರೆಸ್ ಅಧಿಕಾರದ ಕನಸು ಭಗ್ನ...!!

ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ರಾಜಸ್ಥಾನ ರಾಜ್ಯಗಳಲ್ಲಿ ವಿಧಾನಸಭೆಗೆ ಚುನಾವಣಾ ನಡೆಯಲಿದೆ. ವಿಧಾನಸಭಾ ಚುನಾವಣೆಗಳ ಸೋಲು ಗೆಲಿವುಗಳ ಸಮೀಕ್ಷೆಯೊಂದು ಪ್ರಕಟಗೊಂಡಿದ್ದು, ಆಡಳಿತರೂಢ ಬಿಜೆಪಿ, 3 ರಾಜ್ಯಗಳ ಪೈಕಿ ಎರಡರಲ್ಲಿ ಗೆಲುವು ಸಾಧಿಸಿ, ಒಂದರಲ್ಲಿ ಅಧಿಕಾರ ಕಳೆದುಕೊಳ್ಳಲಿದೆ ಎಂದು ಸಮೀಕ್ಷೆ ಹೇಳಿದೆ. ಎರಡು ದಿನಗಳ ಹಿಂದಷ್ಟೇ ಪ್ರಕಟಗೊಂಡಿದ್ದ ಎಬಿಪಿ ನ್ಯೂಸ್‌, ಸಿ ವೋಟರ್‌ ಸಮೀಕ್ಷೆಯು, ಮೂರೂ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಕಳೆದುಕೊಳ್ಳಲಿದ್ದು, ಕಾಂಗ್ರೆಸ್‌ ಮರಳಿ ಅಧಿಕಾರಕ್ಕೆ ಬರಲಿದೆ ಎಂದು ಹೇಳಿತ್ತು.

ಅದರೆ ಸೋಮವಾರ ಟೈಮ್ಸ್‌ ನೌ ಸುದ್ದಿವಾಹಿನಿಯು ವಾರ್‌ರೂಂ ಸ್ಟ್ರಾಟಜೀಸ್‌ ಜೊತೆಗೂಡಿ ಸಮೀಕ್ಷೆ ನಡೆಸಿದ್ದು, ಅದರನ್ವಯ ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ರಾಜಸ್ಥಾನದಲ್ಲಿ ಬಿಜೆಪಿ ಸೋಲುಕಂಡು, ಕಾಂಗ್ರೆಸ್‌ ಅಧಿಕಾರದ ಗದ್ದುಗೆಗೆ ಏರಲಿದೆ ಎಂದು ವರದಿ ಹೇಳಿದೆ.

ಮಧ್ಯಪ್ರದೇಶ:
ಒಟ್ಟು 200 ಸ್ಥಾನಗಳನ್ನು ಹೊಂದಿರುವ ಮಧ್ಯಪ್ರದೇಶ ವಿಧಾನಸಭೆಗೆ ತಕ್ಷಣವೇ ಚುನಾವಣೆ ನಡೆದರೆ ಬಿಜೆಪಿ 142, ಕಾಂಗ್ರೆಸ್‌ 77 ಮತ್ತು ಇತರರು 11 ಸ್ಥಾನ ಗೆಲ್ಲಲಿದ್ದಾರೆ ಎಂದು ಸಮೀಕ್ಷೆ ಹೇಳಿದೆ. ಈ ಹಿಂದಿನ ಚುನಾವಣೆಗೆ ಹೋಲಿಸಿದರೆ ಈ ಫಲಿತಾಂಶವು, ಬಿಜೆಪಿ ಪಾಲಿಗೆ 23 ಸ್ಥಾನ ನಷ್ಟ, ಕಾಂಗ್ರೆಸ್‌ ಪಾಲಿಗೆ 20 ಹೆಚ್ಚುವರಿ ಸೀಟು ತಂದುಕೊಡಲಿದೆ.

ಛತ್ತೀಸ್‌ಗಢ:
90 ಸ್ಥಾನಗಳನ್ನು ಹೊಂದಿರುವ ಛತ್ತೀಸ್‌ಗಢದಲ್ಲಿ ಮುಖ್ಯಮಂತ್ರಿ ರಮಣ್‌ಸಿಂಗ್‌ ನೇತೃತ್ವದ ಬಿಜೆಪಿ ಸರ್ಕಾರ 47 ಸ್ಥಾನ ಗೆಲ್ಲುವ ಮೂಲಕ ಮತ್ತೆ ಅಧಿಕಾರಕ್ಕೆ ಏರಲಿದೆ. ವಿಪಕ್ಷದ ಕಾಂಗ್ರೆಸ್‌ ಕಳೆದ ಬಾರಿಗಿಂತ 6 ಸ್ಥಾನ ಕಳೆದುಕೊಂಡು 33 ಸ್ಥಾನಕ್ಕೆ ತೃಪ್ತಿಪಡಬೇಕಾಗಿ ಬರಲಿದೆ. ಇತರರು 10 ಸ್ಥಾನ ಗೆಲ್ಲಲಿದ್ದಾರೆ.

ರಾಜಸ್ಥಾನ:

ವಸುಂಧರಾ ರಾಜೇ ಮುಖ್ಯಮಂತ್ರಿಯಾಗಿರುವ ರಾಜಸ್ಥಾನದಲ್ಲಿ ಈ ಬಾರಿ ಬಿಜೆಪಿ ಸೋಲಿನ ಮೂಲಕ ಅಧಿಕಾರ ಕಳೆದುಕೊಳ್ಳಲಿದೆ ಎಂದು ಸಮೀಕ್ಷೆ ಹೇಳಿದೆ. ಇದೀಗ ಚುನಾವಣೆ ನಡೆದರೆ ಬಿಜೆಪಿ ಕೇವಲ 75, ಕಾಂಗ್ರೆಸ್‌ 115 ಮತ್ತು ಇತರರು 10 ಸ್ಥಾನ ಗೆಲ್ಲಲಿದ್ದಾರೆ. ಕಳೆದ ಬಾರಿಗೆ ಹೋಲಿಸಿದರೆ ಬಿಜೆಪಿ ಈ ಬರಿ 88 ಸ್ಥಾನಗಳ ನಷ್ಟಅನುಭವಿಸಲಿದ್ದರೆ, ಕಾಂಗ್ರೆಸ್‌ಗೆ ಹೆಚ್ಚುವರಿಯಾಗಿ 94 ಸ್ಥಾನ ಲಭ್ಯವಾಗಲಿದೆ ಎಂದು ಸಮೀಕ್ಷೆ ಹೇಳಿದೆ.

Comments