ವಿಧಾನಸಭಾ ಚುನಾವಣೆಯಲ್ಲಿ ಜೆ.ಡಿ.ಎಸ್ ಜೊತೆ ದೋಸ್ತಿಯಾಗಿ ಗುರುತಿಸಿಕೊಂಡಿದ್ದ ಬಿಎಸ್ಪಿ ಪಕ್ಷ ಸದ್ಯ ಶಾಕ್ ನೀಡುವ ಲಕ್ಷಣಗಳು ಗೋಚರಿಸುತ್ತಿವೆ. ಬಿಎಸ್ಪಿ ಪಕ್ಷದ ಶಾಸಕರೊಬ್ಬರು ಗೆದ್ದು ಈಗ ಸಚಿವರಾಗಿ ಕೆಲಸ ಮಾಡುತ್ತಿದ್ದಾರೆ. ಈ ನಡುವೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧೆ ಮಾಡಲಾಗುವುದು ಎಂದು ಶಿಕ್ಷಣ ಸಚಿವ ಎನ್. ಮಹೇಶ್ ಅವರು ಹೇಳಿದ್ದಾರೆ.
ಸುದ್ದಿಗಾರರ ಜೊತೆಗೆ ಮಾತನಾಡುತ್ತ ಈ ವಿಷಯ ತಿಳಿಸಿದರು, ಇದೇ ವೇಳೆ ಅವರು ಮಾತನಾಡುತ್ತ ಕಾಂಗ್ರೆಸ್, ಜೆಡಿಎಸ್. ಬಿಜೆಪಿ ಈ ಮೂರು ಪಕ್ಷಗಳು ಜಾತಿ ಅಧಾರಿತ ಪಕ್ಷವಾಗಿದ್ದು, ಇವುಗಳು ಜಾತಿ ಪದ್ದತಿಯನ್ನು ನಾಶ ಮಾಡುವುದುಕ್ಕೆ ಆಗುವುದಿಲ್ಲ, ಈ ಪಕ್ಷಗಳಿಗೆ ಶೋಷಿತರನ್ನು ಉದ್ದಾರ ಮಾಡುವ ಮನಸ್ಸು ಮಾಡುವುದಿಲ್ಲ, ಹೀಗಾಗಿ ಬಿಎಸ್ಪಿ ಪಕ್ಷ ಹುಟ್ಟುಕೊಂಡಿದೆ ಅಂತ ಹೇಳಿದರು. ಕಾಂಗ್ರೆಸ್ ಹಾಗೂ ಜೆಡಿಎಸ್ ಲೋಕಸಭಾ ಚುನಾವಣೆಯಲ್ಲಿ ಯಾವುದೇ ಒಪ್ಪಂದ ಮಾಡಿಕೊಂಡರು ಅದಕ್ಕೂ ಬಿಸ್ಪಿಗೆ ಸಂಬಂಧವಿಲ್ಲ ಎಂದು ನುಡಿದರು.
ವಿಧಾನಸಭಾ ಚುನಾವಣಾ ರೀತಿಯಲ್ಲಿ, ಲೋಕಸಭಾ ಚುನಾವಣೆಯಲ್ಲಿ ಮೈತ್ರಿಗೆ ಮುಂದಾಗಿದ್ದ ಜೆ.ಡಿ.ಎಸ್ ಗೆ ಸಚಿವರ ಈ ಮಾತು ನುಂಗಲಾರದ ತುತ್ತಾಗಿದೆ.


Comments
Post a Comment