ಸ್ಪೋಟಕ ಬ್ರೇಕಿಂಗ್: ನೆಹರು ಸ್ಮಾರಕ ಭವನ ಇನ್ನು ಮುಂದೆ ಎಲ್ಲಾ ಪ್ರಧಾನಮಂತ್ರಿಗಳ ಮ್ಯೂಸಿಯಂ...!!!!ಮೋದಿಯವರಿಂದ ಮಹಾತ್ಕರ್ಯ...!!!


ಕಾಂಗ್ರೆಸ್ ಪಕ್ಷ ಹಾಗೂ ಮನಮೋಹನ್ ಸಿಂಗ್ ರ ವಿರೋಧದ ನಡುವೆಯೂ "ತೀನ್ ಮೂರ್ತಿ ಭವನ"ದ ಅವರಣದಲ್ಲಿ ಎಲ್ಲಾ ಪ್ರಧಾನಮಂತ್ರಿಗಳ ಮ್ಯೂಸಿಯಂ ರಚಿಸಲು ಕೇಂದ್ರದ ಮೋದಿ ಸರ್ಕಾರ ಶಂಕು ಸ್ಥಾಪನೆಯನ್ನು ಕೇಂದ್ರ ಸಚಿವರು ನೆರವೆರಿಸಿದ್ದಾರೆ. ಸರಿ ಸುಮಾರು 25 ಎಕರೆ ಇರುವ "ತೀನ್ ಮೂರ್ತಿ ಭವನ"ದ ಅವರಣದಲ್ಲಿ ಪ್ರಧಾನ ಮಂತ್ರಿಗಳ ವಸ್ತು ಸಂಗ್ರಾಲಯ ತಲೆಯೆತ್ತಲಿದೆ.
ಬ್ರಿಟಿಷರು ೧೯೩೦ರಲ್ಲಿ ಬ್ರಿಟಿಷ್ ಸೇನಾಪತಿಯ ವಾಸಕ್ಕೆ ನಿರ್ಮಿಸಿದ್ದ ಈ ಬಂಗಾಲೆಯನ್ನು "ತೀನ್ ಮೂರ್ತಿ ಭವನ" ಎಂದು ಕರೆಯಲಾಗುತ್ತಿದೆ. ಮಹಾತ್ಮ ಗಾಂಧೀಜಿಯವರ ಸಾವಿನ ನಂತರ ನೆಹರು ರವರು ಸುಮಾರು 16 ವರ್ಷಗಳ ಕಾಲ ಈ ಬಂಗಲೆಯಲ್ಲಿ ವಾಸವಿದ್ದರು. ನೆಹರು ಸಾವಿನ ನಂತರ ಈ ಬಂಗಲೆಯನ್ನು ಸಂಪೂರ್ಣವಾಗಿ ನೆಹರೂ ಸ್ಮಾರಕ ಭವನ ಮಾಡಲಾಯಿತು. ಇಲ್ಲಿ ನೆಹರು ಬಳಸಿದ್ದ ಹಲವಾರು ಪುಸ್ತಕಗಳನ್ನು ಹಾಗೂ ವಸ್ತುಗಳನ್ನು ಇಲ್ಲಿ ಇರಿಸಲಾಗಿದೆ.













ಪಂಡಿತ್ ನೆಹರು ರವರಿಗೆ ಮಾತ್ರ ಮೀಸಲಾಗಿದ್ದ ಈ ಭವನ ಇನ್ನು ಮುಂದೆ ನೆಹರು ನಂತರ ಬಂದ ಎಲ್ಲಾ ಪ್ರಧಾನಿಗಳ ವಸ್ತುಸಂಗ್ರಾಹಲ ನಿರ್ಮಿಸಲು ಮೋದಿ ಸರ್ಕಾರ ತೀರ್ಮಾನಿಸಿದೆ. 


ಅದರೆ ಇದಕ್ಕೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅಕ್ಷೇಪ ವ್ಯಕ್ತಪಡಿಸಿದ್ದು ವಾಜಪೇಯಿ ಸರ್ಕಾರವಿದ್ದಗಾಲೂ ತೀನ್ ಮೂರ್ತಿ ಭವನದ ವಿಷಯಕ್ಕೆ ಬಂದಿರಲಿಲ್ಲ ಅದರೆ ಮೋದಿ ಮಾತ್ರ ಭವನದ ಮೂಲ ಸ್ವರೂಪಕ್ಕೆ ದಕ್ಕೆ ಉಂಟು ಮಾಡುತ್ತಿದ್ದಾರೆ ಎಂದು ಪತ್ರದ ಮುಖಾಂತರ ದೂರಿದ್ದಾರೆ. ಏನೇ ಆಗಲಿ ಕೇವಲ ಒಬ್ಬ ಪ್ರಧಾನಿಯ ಮ್ಯೂಸಿಯಂ ಬದಲು ಎಲ್ಲಾ ಪ್ರಧಾನಿಗಳ ಮ್ಯೂಸಿಯಂ ನಿರ್ಮಾಣವಾಗುತ್ತಿರುವುದು ಸಂತಸದ ವಿಷಯ.

Comments