ಬಿಗ್ ಬ್ರೇಕಿಂಗ್: ಬಿ.ಎಸ್.ಯಡಿಯೂರಪ್ಪರ ಪುತ್ರನ ವಿರುದ್ದ ಉಪಚುನಾವಣೆಯಲ್ಲಿ ಸ್ಪರ್ಧಿಸುವ ಕಾಂಗ್ರೆಸ್ ಆಭ್ಯರ್ಥಿ ಯಾರು..??

ರಾಜ್ಯದಲ್ಲಿ ಉಪಚುನಾವಣೆಯ ಸಮರ ಬಹಳ ಜೋರಾಗಿದೆ. ಬಿ.ಜೆ.ಪಿಯ ಶಕ್ತಿ ಕೇಂದ್ರ ಎಂದು ಹೆಸರುವಾಸಿಯಾಗಿರುವ ಶಿವಮೊಗ್ಗ ಕ್ಷೇತ್ರಕ್ಕೆ ಬಿಜೆಪಿಯಿಂದ ಈಗಾಗಲೇ ಯಡಿಯೂರಪ್ಪರ ಪುತ್ರ ಬಿ.ವೈ ರಾಘವೇಂದ್ರ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. 
ಅದರೆ ಇವರ ವಿರುದ್ದವಾಗಿ ಕಾಂಗ್ರೆಸ್ ನಿಂದ ಯಾರು ಸ್ಪರ್ಧಿಸುತ್ತಾರೆ ಎಂಬುದು ಇನ್ನೂ ಅಂತಿಮವಾಗಿಲ್ಲ.
ಅದರೆ ಈ ನಡುವೆ ಕಾಂಗ್ರೆಸ್ ಭದ್ರಾ ಕಾಡಾ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಹೆಸರು ಕೇಳಿಬರುತ್ತಿದೆ. ಕಿಮ್ಮನೆ ರತ್ನಾಕರ್ ಕಾಂಗ್ರೆಸ್ ಟಿಕೆಟ್ ನೀಡುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗುತ್ತಿದೆ. ಒಟ್ಟಾರೆಯಾಗಿ ಉಪಚುನಾವಣೆಯ ಕಾವು ಜೋರಾಗಿದೆ.

Comments