ನಟ ದುನಿಯಾ ವಿಜಯ್ ಗೆ ಜಾಮೀನು ನಿರಾಕರಿಸಿದ ಕೋರ್ಟ್....!!!!!!

ಜಿಮ್​ ಟ್ರೈನರ್​ ಪಾನಿಪುರಿ ಕಿಟ್ಟಿ ಅಣ್ಣನ ಮಗ ಮಾರುತಿಗೌಡನ ಕಿಡ್ನ್ಯಾಪ್​ ಹಾಗೂ ಹಲ್ಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನಲ್ಲಿರುವ ನಟ ದುನಿಯಾ ವಿಜಯ್​ಗೆ ಜಾಮೀನು ನೀಡಲು ಮ್ಯಾಜಿಸ್ಟ್ರೇಟ್​ ಕೋರ್ಟ್​ ನಿರಾಕರಿಸಿದೆ. ಈ ಮೂಲಕ ವಿಜಯ್ ಇನ್ನಷ್ಟು ದಿನ ಪರಪ್ಪನ ಅಗ್ರಹಾರದಲ್ಲೇ ಇರಬೇಕಾಗಿದೆ. ಜಾಮೀನು ಕೋರಿ ದುನಿಯಾ ವಿಜಯ್​ ಪರ ವಕೀಲರು 8ನೇ ಎಸಿಎಂಎಂ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಸೋಮವಾರ ಕೋರ್ಟ್​ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಇಂದಿಗೆ ಆದೇಶವನ್ನು ಕಾಯ್ದಿರಿಸಿತ್ತು. ಆದರೆ ಇಂದು ಕೂಡ ವಿಜಯ್ ಗೆ ಬೇಲ್ ಸಿಕ್ಕಿಲ್ಲ. ಪ್ರಕರಣದಲ್ಲಿ A2 ದುನಿಯಾ ವಿಜಯ್​, A1 ಪ್ರಸಾದ್​ ಹಾಗೂ A3 ಮಣಿ ಜೈಲಿನಲ್ಲಿದ್ದಾರೆ.

Comments